ಪಂಚತಂತ್ರ ಕತೆಗಳು, ಭಾಗ-೧ ಪೀಠಿಕೆ Panchatantra Stories in Kannada

ಕನ್ನಡ ಕತೆಗಳು

23-11-2020 • 4 mins

ವಿಷ್ಣುಶರ್ಮನು ಜೀವನದಲ್ಲಿ ಎದುರಾಗುವ ನಾನಾ ಬಗೆಯ ಸಂಧರ್ಭ ಸಂಕಷ್ಟಗಳನ್ನು ಜಾಣತನದಿಂದ ಬಗೆಹರಿಸಲು ಸಾಧ್ಯವಾಗುವ ಹಾಗೆ ಐದು ಬಗೆಯ ತಂತ್ರಗಳನ್ನು, ಕತೆಗಳ ರೂಪದಲ್ಲಿ ಪಂಚತಂತ್ರವೆಂಬ ಗ್ರಂಥವನ್ನು ರಚಿಸಿದನು.

ಪಂಚತಂತ್ರ ಕತೆಗಳ ವಿಶೇಷತೆ ಏನೆಂದರೆ ಯಾವುದೇ ತಂತ್ರದ ಮುಖ್ಯಕತೆಗಳ ಒಳಗೆ , ಇನ್ನಷ್ಟು ಸಣ್ಣ ಸಣ್ಣ ಕತೆಗಳ ಮೂಲಕ ತಂತ್ರದ ಅಂಶಗಳು ಸುಲಭವಾಗಿ ಅರ್ಥವಾಗುವಂತೆ ರಚಿಸಿರುವುದು. ಈ ಸಣ್ಣ ಕತೆಗಳನ್ನು ಬಿಡಿಯಾಗಿ ಓದಬಹುದು, ಆದರೆ ತಂತ್ರದ ಸಂಪೂರ್ಣ ಸಾರಾಂಶ ಅರ್ಥವಾಗಲು ಮುಖ್ಯಕತೆಯ ಜೊತೆಗೆ  ಓದಬೇಕು.