ಚಂದ್ರಗುಪ್ತ ಮೌರ್ಯ: ಐತಿಹಾಸಿಕ ಭಾರತದ ಮೊದಲ ಸಾಮ್ರಾಜ್ಯದ ಹುಟ್ಟಿನ ಕತೆ

ಕನ್ನಡ ಕತೆಗಳು

01-03-2024 • 8 mins

ಬಹಳ ಹಿಂದಿನ ಕಾಲದ ಕತೆ, ಆಗ ಭಾರತದಲ್ಲಿ ಎಲ್ಲ ಕಡೆಗೂ ಸಣ್ಣ ಸಣ್ಣ ರಾಜ್ಯಗಳಿದ್ದುವು. ಅವುಗಳಲ್ಲಿ ಮಗಧ ಎಂಬ ರಾಜ್ಯವು ಸ್ವಲ್ಪ ದೊಡ್ಡದು. ಅಲ್ಲಿ ನಂದವಂಶದ ರಾಜರು ಆಳುತ್ತಿದ್ದರು. ಆ ಕಾಲದಲ್ಲಿ ಎಲ್ಲ ರಾಜ್ಯಗಳನ್ನೂ ಗೆದ್ದು, ದೊಡ್ಡದೊಂದು ಸಾಮ್ರಾಜ್ಯವನ್ನು ಸ್ಥಾಪಿಸಿದ ಅರಸನೆಂದರೆ ಚಂದ್ರಗುಪ್ತನು. ಅವನೇ ಭಾರತದ ಮೊದಲನೆಯ ಚಕ್ರವರ್ತಿಯೆಂದು ಹೆಸರುಪಡೆದಿದ್ದಾನೆ.