ಎಂದಿಗೂ ಕೈ ಬಿಡದ ವೃತ್ತಿ ಬದುಕಿನ ಪಾಠ

News Karnataka - Podcasts

21-06-2022 • 1 min

ಜೀವನ ಒಂದು ಪಾಠ ಶಾಲೆ. ಕೆಲವರು ಅನುಭವದಿಂದ ಬದುಕಿನ ಪಾಠ ಕಲಿಯುತ್ತಾರೆ. ಇನ್ನು  ಕೆಲವರು ಜೊತೆಗಿರುವವರಿಂದ ಕಲಿಯುತ್ತಾರೆ. ಅದು ನಿರಂತರ ನಮ್ಮ ಜೀವನದಲ್ಲಿ ನಡೆಯುವ  ಪ್ರಕ್ರಿಯೆ. ಕಲಿಯುವಿಕೆಗೆ ಕೊನೆ ಎನ್ನುವುದು ಇರುವುದಿಲ್ಲ. ಕಲಿಯುವ ಆಸಕ್ತಿ ಇದ್ದಲ್ಲಿ  ಎಲ್ಲವೂ ಸಾಧ್ಯ.

ನಾವಿಂದೂ ನಿರಂತರಾವಾಗಿ ದಿನಕ್ಕೊಂದು ಪಾಠ ಕಲಿಯುತ್ತಿದ್ದೇವೆ. ಅದಕ್ಕೆ  ಉದಾಹರಣೆಯಾಗಿ ನನ್ನ ವೃತ್ತಿ ಬದುಕಿನ ಒಂದು ಚಿತ್ರಣವನ್ನು ಮುಂದಿಡೋಣ ಅಂದು  ಕೊಂಡಿದ್ದೇನೆ.

ಮಂಗಳೂರಿನ ಪ್ರತಿಷ್ಟಿತ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ  ನಿರ್ವಹಿಸುತ್ತಿದ್ದಂತಹ ಸಮಯ. ಆ ಒಂದು ಶೈಕ್ಷಣಿಕ ವರ್ಷದಲ್ಲಿ ನ್ಯಾಕ್ ತಂಡ ಕಾಲೇಜಿಗೆ  ಭೇಟಿ ನೀಡಲು ದಿನಗಣನೆ ಎಣಿಸುತ್ತಿದ್ದಂತಹ ಸಮಯ.

ಡಿಪಾರ್ಟ್ಮೆಂಟ್ ಫ್ರೋಫಯಿಲ್,ಬೆಸ್ಟ್ ಪ್ರಾಕ್ಟೀಸ್, ಮಾರ್ಕ್ಸ್ ಎನಾಲಿಸಸ್, ಔಟ್  ಗೋಯಿಂಗ್, ಅಡ್ಮೀಶನ್ ಬಗ್ಗೆಗ್ಗಿನ ಮಾಹಿತಿ ಹೀಗೆ ಅವಶ್ಯಕ ಮಾಹಿತಿಗಳನ್ನು ಕಲೆಹಾಕಿ  ಸಿದ್ಧ ಪಡಿಸುವುದು ಒಂದು ಸಾಹಸದ ಕೆಲಸ. ಜೊತೆಗೆ ವಿದ್ಯಾರ್ಥಿಗಳು ಮಾಡಿರುವಂತಹ ವಾಲ್  ಮ್ಯಾಗಝಿನ್, ಸಾಕ್ಷ್ಯಚಿತ್ರ, ಕಿರುಚಿತ್ರ ಹಾಗೂ ಸ್ವತಹಃ ವಿದ್ಯಾರ್ಥಿಗಳೇ  ಸಂಗ್ರಹಿಸಿದ್ದ ಬೇರೆ ಬೇರೆ ರಾಜ್ಯ, ಜಿಲ್ಲೆ, ಭಾಷೆಯ ದಿನಪತ್ರಿಕೆ, ನಿಯತಕಾಲಿಕೆ ಹಾಗೂ  ಅಂತರಾಷ್ಟೀಯ ಪತ್ರಿಕೆಗಳನ್ನು ಪ್ರದರ್ಶನಕ್ಕೆ ಇಡಬೇಕಿತ್ತು. ಬೇರೆ ಬೇರೆ ಆಂಗಲ್‌ನಿಂದ  ಕಾಲೇಜನ್ನು ಸರೆಹಿಡಿದ ಫೋಟೋ, ತುಂಬಾನೇ ಕ್ರೀಯೆಟೀವ್ ಆಗಿ ತೆಗಿದಿರುವ ಒಳ್ಳೆ ಒಳ್ಳೆ  ಪೋಟೊ. ಲೇಖನಗಳು, ಕವನಗಳು ಹೀಗೆ ವಿದ್ಯಾರ್ಥಿಗಳ ಬರವಣಿಗೆಯನ್ನು ಪ್ರದರ್ಶನಕ್ಕೆ  ಇಡಬೇಕಿತ್ತು. ಒಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣ ಆಗಬೇಕಿತ್ತು ಈ  ಪ್ರದರ್ಶನದಲ್ಲಿ.

ಅನುಭವದ ಕೊರತೆಯಿಂದ ನಾನು ಮತ್ತು ನನ್ನ ಕೊಲಿಗ್ ಪ್ರತಿಯೊಂದು ವಿಷಯಯಕ್ಕು ಹೆಜ್ಜೆ  ಹೆಜ್ಜೆಗೂ ಮುಖ್ಯಸ್ಥರನ್ನು ಅವಲಂಬಿಸಿದ್ದೇವು. ಅವರ ಮಾರ್ಗದರ್ಶನದಲ್ಲಿಯೇ ಕೆಲಸ  ಸುಗಮವಾಗಿ ನಡೆಯಿತು. ಅಂದಹಾಗೆ ನಮ್ಮ ಮುಖ್ಯಸ್ಥರು ಆಂಗ್ಲ ವಿಭಾಗದ ಉಪಾನ್ಯಾಸಕಿ.  ಕಾಲೇಜಿನ ಬೆಸ್ಟ ಆಂಡ್ ಇನೋವೇಟಿವ್, ದಿ ಪರ್‌ಫೆಕ್ಟ್ ವಿಭಾಗದ ಪರಫೆಕ್ಟ್ ಉಪಾನ್ಯಾಸಕಿ.  ತಾಳ್ಮೆ, ಕ್ರೀಯಾಶೀಲತೆ, ಸೃಜನಶೀಲತೆ ಇವರ ಶಕ್ತಿ. ಇವರ ಮಾರ್ಗದಶದಲ್ಲಿ ಪಳಗಬೇಕಿತ್ತು  ನಮ್ಮ ವಿಭಾಗ.

ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೆ ಕಾಲೇಜಿನಲ್ಲಿಯೇ ಬಿಡಾರ.  ಕಾಲೇಜು ಇತಿಹಾಸ ಕೆದಕಿ ಒಂದಷ್ಟು ದಾಖಲೆಗಳನ್ನು ಕಲೆ ಹಾಕಿ ಎಲ್ಲಾ ಫೈಲ್ ರೆಡಿ  ಮಾಡಿದ್ದು ಆಯಿತ್ತು.

ನಮ್ಮ ಹಾಗೆ ಬಾಕಿ ವಿಭಾಗದಲ್ಲಿಯು ಬಿಡುವು ಇಲ್ಲದೆ ಕೆಲಸಗಳು ನಡೆಯುತ್ತಿತ್ತು. ಹೀಗೆ  ನಮ್ಮ ಆಂಗ್ಲ ವಿಭಾಗದಲ್ಲಿ ಎನು ನಡೆಯುತ್ತಿದೆ ಎಂದು ಇಣುಕಿದಾಗ ನಮ್ಮ ಮುಖ್ಯಸ್ಥರು  ಕೆಲಸದಲ್ಲಿ ಮುಳುಗಿರುವ ಹಾಗೆ ಭಾಸವಾಗತ್ತಿತ್ತು. ಆದರೂ ಒಳಗೆ ನಡೆದು ಮೇಡಂ ಎಂದಾಗ  ಬನ್ನಿ ಬನ್ನಿ ಎಲ್ಲಿಯವರಗೆ ಆಯಿತ್ತು ಕೆಲಸ ಎಂದು ಕೇಳಿದರು. ನೀವೂ ಹೇಳಿಕೊಟ್ಟ ಹಾಗೆ  ತಯಾರಿ ಮಾಡಿದ್ದೇವೆ ಎಂದಾಗ ಸರಿ, ಡಿಪಾರ್ಟ್ ಮೆಂಟ್ ಲೈಬ್ರೆರಿಯ ಪುಸ್ತಕಗಳಿಗೆ ಹೊಸದಾಗಿ  ನಂಬರ್ ಹಾಕಿ. ಮೇಡಂ ನಾವು ಆಗಲೇ ಹಾಕಿ ಆಯಿತ್ತು. ನಮ್ಮಗಿಂತ ಮೊದಲು ಯಾಕೆ ಹಾಕಿದ್ದೀರಿ  ಎಂದಾಗ, ಮನಸ್ಸಿನ ಮೂಲೆಯಲ್ಲಿ ಎನೋ ಒಂದು ಖುಷಿ ನಮ್ಮ ಕೆಲಸ ಸರಾಗವಾಗಿ ಸಂಪೂರ್ಣವಾಗಿದೆ  ಎಂದು.

ಕಡೆಗೂ ಆ ಘಳಿಗೆ ಬಂದೆ ಬಂತು ನಾಳೆ ನ್ಯಾಕ್ ಸಮಿತಿ ಭೇಟಿಯ ದಿನ . ಮುಂಚಿನ ದಿನ ಕಡೆಯ  ಬಾರಿ ಪೂರ್ವ ತಯಾರಿಯ ಬಗ್ಗೆ ಮೀಟಿಂಗ್. ಯಥಾವತ್ತಾಗಿ ಎಲ್ಲಾ ಚರ್ಚೆಯ ನಂತರ ನಾಳೆ  ಪ್ರೆಸೆಂಟೇಶನ್ ನೀಡುವ ವಿಭಾಗಗಳ ಹೆಸರನ್ನು ಹೇಳತೊಡಗಿದ್ದರು. ಅದಕ್ಕೂ ಮುಂಚೆ  ತಯಾರಿಯಲ್ಲಿ ದಿ ಬೆಸ್ಟ್ ವಿಭಾಗಗಳ ಪ್ರಕಾರ ಪಟ್ಟಿ ಮಾಡಿ ಬಂದಿದ್ದ ಪ್ರಾಂಶುಪಾಲರು,  ಒಂದೊಂದಾಗಿ ಹೆಸರನ್ನು ಓದಿ ಹೇಳಲು ಶುರುಮಾಡಿದ್ದರು.

ನಾಲ್ಕನೇ ಪ್ರೆಸೆಂಟೇಶನ್ ನಮ್ಮ ವಿಭಾಗದ ಹೆಸರು ಹೇಳುವಾಗ ಎಲ್ಲಿಲ್ಲದ ಖುಷಿ ಜೊತೆಗೆ  ಸ್ವಲ್ಪ ಆತಂಕ. ತುಂಬಾನೇ ಅನುಭವಸ್ಥರ ನಡುವೆ ಅತಿಥಿ ಉಪನ್ಯಾಸಕರಿಗೆ ಸಿಕ್ಕಂತಹ ಸಣ್ಣದಾದ  ಗೌರವ. ವಸ್ತು ಪ್ರದರ್ಶನದಲ್ಲಿ ಎರಡನೇ ಸ್ಥಾನ ನಮ್ಮ ವಿಭಾಗಕ್ಕೆ ದಕ್ಕಿತ್ತು.  ಇದೆಲ್ಲವೂ ಸಾಧ್ಯವಾಗಿದ್ದು ನಮ್ಮ ಮುಖ್ಯಸ್ಥರಿಂದ.

ಕಲಿಯುವ ಮನಸ್ಸು ನನಗಿತ್ತು ಕಲಿಸುವ ವ್ಯವಧಾನ ಅವರಲ್ಲಿ ಇತ್ತು. ಎಲ್ಲೊ ಒಂದೆಡೆ  ಸೈಡ್ ಲೈನ್ ಇದ್ದವರು ಮೈನ್ ಲೈನ್‌ಗೆ ಬಂದಿದ್ದೇವು. ಪಾಠ ಆಗಲಿ ಕೆಲಸ ಆಗಲಿ ಎರಡನ್ನು  ಶೃದ್ದೆಯಿಂದ ಕಲಿತರೆ ಅದು ನಮ್ಮ ಕೈ ಖಂಡಿತ ಹಿಡಿಯುತ್ತದೆ. ಮುಂದೆ ಪ್ರತಿಷ್ಟಿತ  ಬೇರೆಯೊಂದು ಕಾಲೇಜಿನಲ್ಲಿ ನಾನೇ ಮುಖ್ಯಸ್ಥಳಾಗಿ ಕಾರ್ಯನಿರ್ವಹಿಸಲು ತುಂಬಾನೇ  ಸಹಾಕಾರಿಯಾಯಿತು. ಒಬ್ಬ ಉಪನ್ಯಾಸಕಿಯಾಗಿ ಒಳ್ಳೆಯ ವಿದ್ಯಾರ್ಥಿಯಾಗಿ ಕಲಿತದ್ದಕ್ಕೆ  ಸಾರ್ಥಕವಾಯಿತು.

--- Send in a voice message: https://podcasters.spotify.com/pod/show/newskarnataka/message

You Might Like

The Morning Brief
The Morning Brief
The Economic Times
ANI Podcast with Smita Prakash
ANI Podcast with Smita Prakash
Asian News International (ANI)
ThePrint
ThePrint
ThePrint
3 Things
3 Things
Express Audio
FT News Briefing
FT News Briefing
Financial Times
Top of the Morning
Top of the Morning
Mint - HT Smartcast
Economist Podcasts
Economist Podcasts
The Economist
HT Daily News Wrap
HT Daily News Wrap
Hindustan Times - HT Smartcast
Daybreak
Daybreak
The Ken
The Daily
The Daily
The New York Times
The Journal.
The Journal.
The Wall Street Journal & Gimlet
Serial
Serial
Serial Productions & The New York Times
WSJ What’s News
WSJ What’s News
The Wall Street Journal
WSJ Tech News Briefing
WSJ Tech News Briefing
The Wall Street Journal
The Signal Daily
The Signal Daily
The Core Team