ಒಬೆಸಿಟಿ ಸಾಮಾನ್ಯವಾಗಿ ತುಂಬಾನೇ ದೇಹದ ಕೊಬ್ಬನ್ನು ಹೊಂದಿರುವಂತಹುದು. ಹಾಗೂ ಓವರ್ ವೈಟ್ ಎಂದರೆ ತೂಕ ಜಾಸ್ತಿ ಹೊಂದಿರುವುದು. ಸಾಮನ್ಯವಾಗಿ ನಮ್ಮ ಶರೀರದ ಮಾಂಸಖಂಡಗಳಿಂದ, ಎಲುಬುಗಳಿಂದ ಅಥವಾ ದೇಹದಲ್ಲಿರುವ ನೀರಿನಿಂದ ಓವರ್ ವೈಟ್ ಬರುವ ಸಾಧ್ಯತೆಗಳಿವೆ.
ಒಬ್ಬ ಮನುಷ್ಯನಿಗೆ ತನ್ನ ಎತ್ತರಕ್ಕೆ ಅನುಗುಣವಾಗಿ ದೇಹದ ತೂಕ ಸರಿಯಾಗಿರಬೇಕು. ಒಂದು ವೇಳೆ ಎತ್ತರೆಕ್ಕೆ ಅನುಗುಣವಾಗಿ ನಮ್ಮ ದೇಹ ತೂಕ 10ರಿಂದ 20 ಶೇ. ಹೆಚ್ಚಾಗಿದ್ದರೆ ಅದನ್ನು ಒಬೆಸಿಟಿ ಎಂದು ಕರೆಯಬಹುದು ಎಂದು ಕಾಕುಂಜೆ ಆಯುರ್ವೇದಿಕ್ ವೆಲ್ನೆಸ್ ಕ್ಲಿನಿಕ್ನ ವೈದ್ಯೆ ಡಾ.ಅನುರಾಧ ಹೇಳುತ್ತಾರೆ.
ಒಬೆಸಿಟಿಗೆ ಕೆಲವು ಮುಖ್ಯ ಕಾರಣಗಳು:
ಕಾಬ್ರೋಹೈಡ್ರೇಟ್ಸ್ ಹೆಚ್ಚು ಇರುವ ಆಹಾರಗಳನ್ನು ತಿನ್ನುವುದರಿಂದ ಅದು ಕೊಬ್ಬಾಗಿ ಪರಿವರ್ತನೆಗೊಂಡು ನಮ್ಮ ದೇಹದಲ್ಲಿ ಸಂಗ್ರವಾಗುತ್ತದೆ.
ದೇಹಕ್ಕೆ ಯಾವುದೇ ರೀತಿಯ ವ್ಯಾಯಮಗಳಿಲ್ಲದಿರುವುದು ಕೂಡ ಒಬೆಸಿಟಿಗೆ ಕಾರಣವಗಬಹುದು.
ಹಲವರು ಒತ್ತಡದಲ್ಲಿರುವಾಗ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಪದೇ ಪದೇ ಆಹಾರಗಳನ್ನು ಸೇವಿಸುವುದರಿಂದ ಒಬೆಸಿಟಿ ಬರಲು ಮುಖ್ಯ ಕಾರಣವಾಗಬಹುದು.
ಥೈರೋಯಿಡ್, ಪಿಸಿಒಡಿ ಸಮಸ್ಯೆ ಇರುವವರಿಗೆ ಸ್ವಲ್ಪವೇ ಆಹಾರ ತಿಂದರೂ ಈ ರೀತಿಯ ಸಮಸ್ಯೆಗಳು ಎದುರಾಗುತ್ತದೆ.
ಹಲವು ಬಾರಿ ವಂಶಪಾರಂಪರರ್ಯವಾಗಿ ಬರುವಂತಹ ಸಾಧ್ಯತೆಗಳು ಇವೆ.
ಒಬೆಸಿಟಿಯಿಂದ ನಾವು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮುಖ್ಯವಾಗಿ ಡಯಾಬಿಟಿಸ್, ಸ್ಟ್ರೋಕ್, ಹೃದಯ ಸಂಬಂಧಿ ಖಾಯಿಲೆಗಳು, ಹಾಗೂ ಕೆಲವು ತರಹದ ಕ್ಯಾನ್ಸರ್ ಗಳಿಗೆ ಈ ಒಬೆಸಿಟಿ ದಾರಿಮಾಡಿಕೊಡಬಹುದು.
ಆಹಾರಗಳು:
ತುಂಬಾ ವ್ಯಾಯಮ ಮಾಡುವ ದೇಹಗಳಿಗೆ ಹೆಚ್ಚಿನ ಕಾಬ್ರೋಹೈಡ್ರೇಟ್ಸ್ ಸೇವಿಸಿದರೆ ಅದು ಕರಗಿ ಹೋಗುವ ಸಂಭವ ಜಾಸ್ತಿ. ಕುಳಿತು ಕೆಲಸ ಮಾಡುವ ಜನರಿಗೆ ಆದಷ್ಟು ಆಹಾರದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ಆಹಾರ ಸೇವಿಸುವುದರಿಂದ ಒಬೆಸಿಟಿ ಕಡಿಮೆ ಮಾಡಿಕೊಳ್ಳಬಹುದು. ಜೊತೆಗೆ ಕಡಿಮೆ ಕಾಬ್ರೋಹೈಡ್ರೇಟ್ಸ್ ಆಹಾರಗಳನ್ನು ಸೇವಿಸುವುದು ಉತ್ತಮ. ಪದೇ ಪದೇ ತಿನ್ನುವುದನ್ನು ಕಡಿಮೆ ಮಾಡುವುದು, ವ್ಯಾಯಾಮ ಮಾಡುವುದರಿಂದ ದೇಹದ ತೂಕವನ್ನು ಸರಿದೂಗಿಸಿಕೊಳ್ಳಬಹುದು.
--- Send in a voice message: https://podcasters.spotify.com/pod/show/newskarnataka/message