ಭೇದಿ ನಿಯಂತ್ರಿಸಲು ಕೆಲವು ಆಹಾರ ಕ್ರಮಗಳು

News Karnataka - Podcasts

01-07-2022 • 2 mins

ಭೇದಿಯನ್ನು ಎರಡು ರೀತಿಯಾಗಿ ವಿಂಗಡಿಸಬಹುದು ಮೊದಲನೆಯದ್ದು ಇನ್‍ಫೆಕ್ಷನ್‍ನಿಂದಾಗಿ ಭೇದಿ ಪ್ರಾರಂಭವಾಗಿದ್ದಲ್ಲಿ ಜ್ವರರದ ಲಕ್ಷಣಗಳು ಕಂಡುಬರಬಹುದು ಇಂತಹ ಸಂದರ್ಭದಲ್ಲಿ ಆಂಟಿಬಯೋಟಿಕ್ ಜೊತೆಗೆ ಸರಿಯಾದ ಮೆಡಿಸಿನ್ ಬಳಸುವುದು ಉತ್ತಮ. ಎರಡನೆಯದ್ದು ಆಹಾರದ ಅಜೀರ್ಣದಿಂದಾಗಿ ಉಂಟಾಗಿರಬಹುದು ಈ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಆಹಾರವನ್ನು ಸೇವಿಸುವುದು ಬಹಳ ಮುಖ್ಯವಾಗಿರುತ್ತದೆ.

ಮನೆಯಲ್ಲಿನ ಮನೆ ಮದ್ದುಗಳನ್ನು ಬಳಸಿ ಭೇದಿಯನ್ನು ಕಡಿಮೆಗೊಳಿಸಬಹುದು ಎಂದು ಕಾಕುಂಜೆ ಆಯುರ್ವೇದಿಕ್ ವೆಲ್‍ನೆಸ್ ಕ್ಲಿನಿಕ್‍ನ ವೈದ್ಯೆ ಡಾ.ಅನುರಾಧ ಹೇಳುತ್ತಾರೆ.

ಭೇದಿ ಪ್ರಾರಂಭವಾದಗ ಅದನ್ನು ಒಮ್ಮೆಗೆ ನಿಲ್ಲಿಸುವಂತೆ ಜೌಷಧಗಳನ್ನು ಬಳಸಬಾರದು. ಒಂದು ವೇಳೆ ದೇಹದಲ್ಲಿ ನಿಶ್ಯಕ್ತಿ ಉಂಟಾದಾಗ ಮಾತ್ರವೇ ಬೇಧಿಯನ್ನು ನಿಲ್ಲಿಸಬಹುದು. ಮುಖ್ಯವಾಗಿ ಮಕ್ಕಳಲ್ಲಿ ಹಾಗೂ ವೃದ್ಧರಲ್ಲಿ ಭೇದಿ ಉಂಟಾದಾಗ ಜಾಗೃತೆ ವಹಿಸಬೇಕಾಗುತ್ತದೆ.

ಭೇದಿ ಪ್ರಾರಂಭವಾದಾಗ ನೀರಿಗೆ ಉಪ್ಪು ಮತ್ತು ಸಕ್ಕರೆ ಬೆರೆಸಿ ಸ್ವಲ್ಪ ಸ್ವಲ್ಪವೇ ಕುಡಿಯಬೇಕು. ಆಹಾರವನ್ನು ಸೇವಿಸುವಾಗ ಹೆಚ್ಚಾಗಿ ಗಂಜಿಯನ್ನು ಸೇವಿಸುವುದು, ಅನ್ನದ ಪ್ರಮಾಣ ಕಡಿಮೆಗೊಳಿಸಿ ಗಂಜಿಯನ್ನು ಸೇವಿಸುವುದು ಒಳ್ಳೆಯದು. ಜೊತೆಗೆ ಬೆಳ್ತಿಗೆ ಅಕ್ಕಿಯನ್ನು ಸ್ವಲ್ಪವೆ ಹುರಿದು ನೀರು ಹಾಕಿ ಅನ್ನದಂತೆ ಬೇಯಿಸಿ ಅದರ ನೀರನ್ನು ಬಾಯಾರಿಕೆಯಾದಾಗ ಕುಡಿಯುವುದು ಹಾಗೂ ಅದೇ ಅನ್ನವನ್ನು ಮಜ್ಜಿಗೆಯ ಜೊತೆ ಸೇವಿಸುವುದು ಬಹಳ ಉಪಕಾರಿ.

ಅರಳಿಗೆ(ಹೊದ್ಲು) ನೀರು ಹಾಕಿ ಅದನ್ನು ಬೇಯಿಸಿ ಅದರ ಗಂಜಿಯನ್ನು ತಿನ್ನುವುದರಿಂದ ಹೊಟ್ಟೆಗೆ ಉತ್ತಮ. ಭೇದಿಯ ಸಮಯದಲ್ಲಿ ದಾಳಿಂಬೆ ಹೊರತು ಪಡಿಸಿ ಬೇರೆ ಯಾವ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ.

ಹೆಚ್ಚಾಗಿ ನೀರು ಕುಡಿಯುವುದು ಕೂಡ ಆ ಸಂದರ್ಭದಲ್ಲಿ ಉತ್ತಮವಲ್ಲ. ನೀರನ್ನು ಗಂಜಿಯ ರೂಪದಲ್ಲಿ ಸೇವಿಸಬಹುದು. ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಅದಿಕ್ಕೆ ಜೀರಿಗೆ ಮತ್ತೆ ಕಾಯಿತುರಿ ಸೇರಿಸಿ ರುಬ್ಬಿಕೊಂಡು ಪ್ರಮಾಣಕ್ಕೆ ಸರಿಯಾಗಿ ಮಜ್ಜಿಗೆ ಸೇರಿಸಿ ತಂಬುಳ್ಳಿ ಮಾಡಿ ತಿನ್ನುವುದು ಕೂಡ ಬೇಧಿಗೆ ತುಂಬಾ ಉಪಯುಕ್ತ.

ಭೇದಿಯ ಸಂದರ್ಭದಲ್ಲಿ ಜೀರ್ಣಕ್ರಿಯೆಗೆ ಸುಲಭವಾಗುವಂತಹ ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

--- Send in a voice message: https://podcasters.spotify.com/pod/show/newskarnataka/message

You Might Like

The Morning Brief
The Morning Brief
The Economic Times
ANI Podcast with Smita Prakash
ANI Podcast with Smita Prakash
Asian News International (ANI)
ThePrint
ThePrint
ThePrint
3 Things
3 Things
Express Audio
FT News Briefing
FT News Briefing
Financial Times
Top of the Morning
Top of the Morning
Mint - HT Smartcast
Economist Podcasts
Economist Podcasts
The Economist
Daybreak
Daybreak
The Ken
HT Daily News Wrap
HT Daily News Wrap
Hindustan Times - HT Smartcast
The Daily
The Daily
The New York Times
The Journal.
The Journal.
The Wall Street Journal & Gimlet
WSJ What’s News
WSJ What’s News
The Wall Street Journal
Serial
Serial
Serial Productions & The New York Times
WSJ Tech News Briefing
WSJ Tech News Briefing
The Wall Street Journal
The Signal Daily
The Signal Daily
The Core Team