Feb 24 2024
Let's Understand How to make a Cinema ft. Technical Team(Sapta Sagaradaache Ello)
“ಮಾತು ಕಥೆ with Skandyyman”ನಲ್ಲಿ ಈ ವಾರ, ಹೊಸ ತರದ ಅನುಭವ.
ಚಲನಚಿತ್ರಗಳನ್ನು ಪ್ರೀತಿಸಿ, ಸವಿಸೋ ನಮಗೆ ಹಿರಿತೆರೆಯ ಮೇಲೆ ಅದನ್ನ ನೋಡೋದೇ ಆನಂದ. ದೃಶ್ಯಾವಳಿಗಳನ್ನು ಚೌಕಟ್ಟಲ್ಲಿ ಹಿಡಿದಿಟ್ಟುಕೊಳ್ಳುವ ಕಲೆ, ನವಿರೇಳಿಸುವಂತ ಸಂಗೀತ, ಮನೋಜ್ಞ ನಿರ್ದೇಶನ, ಕಣ್ಣಿಗೆ ಹಬ್ಬ.
ತೆರೆಯ ಮೇಲೆ ಕಾಣುವಂಥ ನೆಚ್ಚಿನ ಕಲಾವಿದರನ್ನು ಶ್ಲಾಘಿಸುತ್ತ, ತೆರೆಯ ಹಿಂದೆ ಎಲೆಮರೆಕಾಯಿಯಂತೆ ಮರೆಯಾಗುವ ಕಲಾವಿದರನ್ನ ಕೆಲವೊಮ್ಮೆ ಮರೆಯುತ್ತೇವೆ.
77ನೇ ಎಪಿಸೋಡ್ ಈ ಸಿನಿರಂಗಕ್ಕೆ ಬೆನ್ನೆಲುಬಾಗಿ ನಿಂತಿರೋರನ್ನು ಮೆರೆಯುವ ಪ್ರಯತ್ನ. ಸಪ್ತ ಸಾಗರದಾಚೆ - ಚಿತ್ರದ ತಾಂತ್ರಿಕ ತಂಡದೊಂದಿಗೆ ಮಾತುಕತೆಯಲ್ಲಿ ನಿರ್ದೇಶನ, ಹಿನ್ನಲೆ ಸಂಗೀತ, ಕಲೆ ಮತ್ತು ಸೆಟ್ ವಿನ್ಯಾಸದ ಬಗ್ಗೆ ನಮ್ಮ ಹರಟೆ.
ಸಿನಿಮಾ ತೋರಿಸುವ ಕಣ್ಣೊಳಗೆ ಪ್ರವೇಶಿಸಿ. ಈಗಲೇ ವೀಕ್ಷಿಸಿ, Skandyyman ಯೂಟ್ಯೂಬ್ ಚಾನೆಲ್ ನಲ್ಲಿ.